Tuesday, 29 December 2015

ವಿಶ್ವ ಮಾನವ ದಿನಾಚರಣೆ

            ವಿಶ್ವ ಮಾನವ ದಿನಾಚರಣೆ
   
ನೆಲಮಂಗಲ : ಸರಕಾರಿ ಪ್ರಥಮ ದರ್ಜೆ ಕಾಲೇಜು ನೆಲಮಂಗಲದಲ್ಲಿ ಸೋಮವಾರ 29ನೇ ತಾರೀಕಿನಂದು ಕುವೆಂಪುರವರ ಜನ್ಮದ ದಿನದ ಅಂಗವಾಗಿ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆಯನ್ನು  ಹೇಮಾ (ಬಿ ಕಾಂ ವಿಧ್ಯಾರ್ಥಿನಿ) ನಡೆಸಿಕೊಟ್ಟ ನಂತರ ಸ್ವಾಗತ ಭಾಷಣವನ್ನು ಪ್ರೊ. ಪ್ರಮೀಳಾ ಅವರು ನಡೆಸಿಕೊಟ್ಟರು. ತದನಂತರದಲ್ಲಿ ದೀಪ ಬೆಳಗಿಸುವ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಬಾಲಕೃಷ್ಣ ಅವರು ಹಾಗೂ ನಿವೃತ್ತ ಮುಖ್ಯೋಪಾಧ್ಯಾಯರು , ಕಾಲೇಜು ಅಭಿವೃದ್ಧಿ ಸಮಿತಿಯ  ಸದಸ್ಯರಾದಂತಹ ಶ್ರೀ ಭೀಮರಾಜು ಹಾಗೂ ಪ್ರೊ. ಪುಷ್ಪ ಅವರು ನಡೆಸಿಕೊಟ್ಟರು. ನಂತರ ವಿಧ್ಯಾರ್ಥಿನಿ ಧನಲಕ್ಷ್ಮಿ ಕುವೆಂಪುರವ ಕುರಿತಾದ ಚಿಕ್ಕದಾದ ವಿಚಾರಗಳನ್ನು ಮಾತಾಡಿದರು.

         ಮುಖ್ಯ ಅತಿಥಿಗಳ ಭಾಷಣವನ್ನು ಪ್ರೊ. ತೋಪೆಶ್ ಅವರು, ವಿಚಾರಗಳ ಮೂಲಕ ವೈಚಾರಿಕತೆ, ಕನ್ನಡದ ಐಕ್ಯತೆಯನ್ನು ಸಾಧಿಸಿದ ಕವಿಯೆಂದು ಸೂಕ್ಷ್ಮವಾಗಿ ತಿಳಿಸಿಕೊಟ್ಟರು. ಹಾಗೂ ಶ್ರೀ ಭೀಮರಾಜು ಆವರೂ ಸಹ ಕುವೆಂಪು ಅವರ ಕುರಿತಾಗಿ ಮಾತಾಡಿದರು ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಹೆಚ್ ಕೆ ಬಾಲಕೃಷ್ಣ ಅವರು ಮಾತಾಡಿದರು.




        ಕಾರ್ಯಕ್ರಮದಲ್ಲಿ ಪ್ರೊ. ಮಂಜಪ್ಪ, ಡಾ. ರಾಜಣ್ಣ ನರಸಿಂಹಯ್ಯ ಸರ್ , ಕಾಲೇಜಿನ ಎಲ್ಲಾ ಪ್ರಾಧ್ಯಾಪಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

             ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪುರವರ ಸವಿ ನೆನಪನ್ನು ಇಂದು ನಮ್ಮ ಕಾಲೇಜಿನಲ್ಲಿ ಆಚರಿಸಲಾಯಿತು. 

             
        ವಿಶ್ವ ಮಾನವ ದಿನಾಚರಣೆ

    ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನವಾದ ಡಿಸೆಂಬರ್ 29 ಅನ್ನು ಪ್ರತಿವರ್ಷ ವಿಶ್ವಮಾನವ ದಿನಾಚಾರಣೆಯನ್ನಾಗಿ ಆಚರಿಸಲು ರಾಜ್ಯ ಸರಕಾರ ನಿರ್ಧರಿಸಿದೆ.

             ರಾಜ್ಯ ಸರಕಾರದ ವತಿಯಿಂದಲೇ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಕುವೆಂಪು ಅವರ ವಿಶೇಷ ಗೀತಗಾಯನ ಹಾಗೂ ಉಪನ್ಯಾಸ ಕಾರ್ಯಕ್ರಮಗಳನ್ನು ಉದ್ದೇಶಿಸಲಾಗಿದೆ. ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ಸಂಬಂಧ ಸರಕಾರ ಇನ್ನೂ ಅಧಿಕೃತ ಆದೇಶ ಹೊರಡಿಸಿಲ್ಲ. ಆದರೆ ಈ ಸಂಬಂಧ ಮೌಖಿಕ ಸೂಚನೆ ನೀಡಿದೆ.

        ಈ ನಡುವೆ ಎಲ್ಲಾ ಶಾಲಾ ಕಾಲೇಜುಗಳಲ್ಲಿಯೂ ಅಂದು ಕುವೆಂಪು ಅವರ ವಿಶ್ವ ಮಾನವ ಸಂದೇಶ ಕುರಿತಂತೆ ವಿಚಾರ ಗೋಷ್ಟಿಗಳನ್ನು ಏರ್ಪಡಿಸುವ ಮೂಲಕ 'ವಿಶ್ವ ಮಾನವ ದಿನಾಚರಣೆ'ಯನ್ನು  ಅರ್ಥ ಪೂರ್ಣವನ್ನಾಗಿ ಆಚರಿಸಲು ನಿರ್ದೇಶನ ನೀಡಲಾಗಿದೆ.

       ಕುವೆಂಪು ಅವರು ಮಾನವ ಕುಲಕ್ಕೆ ನೀಡಿರುವ ಮಾರ್ಗದರ್ಶನ ಹಾಗೂ ಆದರ್ಶಗಳು ಸಾರ್ವಕಾಲಿಕ. ಕನ್ನಡಕ್ಕೆ ಹೊಸ ನುಡಿಗಟ್ಟು ಹಾಗೂ ಹೊಸ ಕಲ್ಪನೆಗಳನ್ನು ನೀಡಿ ಹೊಸಗನ್ನಡ ಸಾಹಿತ್ಯವನ್ನು  ಶ್ರೀಮಂತಗೊಳಿಸಿದ ಧೀಮಂತ ಸಾಹಿತಿ 'ಮನುಜ ಮತ ವಿಶ್ವ ಪಥ' ಸಂದೇಶ ಸಾರಿದ ಸ್ರೇಷ್ಟ ವಿಶ್ವಮಾನವ. ಅಂತಹ ಮಹಾನ್ ಚೇತನಾ ಕುವೆಂಪು ಅವರ ವಿಶ್ವ ಮಾನವ ಸಂದೇಶ ಕುರಿತು ವಿಚಾರ ಗೋಷ್ಠಿ ಏರ್ಪಡಿಸುವ ಮೂಲಕ ಅವರ ಜನ್ಮ ದಿನಾಚರಣೆಯನ್ನಾಗಿ ಆಚರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಲಾ ಕಾಲೇಜು ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ.